ಬ್ಯಾಂಕ್ ಆಫ್ ಬರೋಡಾ ಸಂಸ್ಥಾಪಕರ ದಿನಾಚರಣೆ‌ : ಉಪ್ಪಿನಂಗಡಿ ಶಾಖೆಯಿಂದ ಪ್ರಥಮ ದರ್ಜೆ ಕಾಲೇಜಿಗೆ ಕಂಪ್ಯೂಟರ್ ಕೊಡುಗೆ

0

ಉಪ್ಪಿನಂಗಡಿ: ಬ್ಯಾಂಕ್ ಆಫ್ ಬರೋಡಾ ಸಂಸ್ಥಾಪಕ ಮಹಾರಾಜ ಸಯ್ಯಾಜಿರಾವ್ ಗಾಯಕ್‌ವಾಡ್-3 ಇವರ ದಿನಾಚರಣೆಯನ್ನು ಬ್ಯಾಂಕ್ ಆಫ್ ಬರೋಡಾ ಉಪ್ಪಿನಂಗಡಿ ಶಾಖೆಯಲ್ಲಿ ಜುಲೈ 20ರಂದು ಆಚರಿಸಲಾಯಿತು.‌

ಬ್ಯಾಂಕ್ ಕಚೇರಿಯಲ್ಲಿ ಸಂಸ್ಥಾಪಕರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಿ ದಿನಾಚರಣೆ ನಡೆಸಲಾಯಿತು. ಶಾಖೆಯ ವತಿಯಿಂದ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕಂಪ್ಯೂಟರ್ ಮತ್ತು ಸ್ಕ್ಯಾನರ್‌ನ್ನು ಕೊಡುಗೆಯಾಗಿ ನೀಡಲಾಯಿತು.

ಸಮಾರಂಭದಲ್ಲಿ ಬ್ಯಾಂಕ್ ಗ್ರಾಹಕರಾದ ಪ್ರಕಾಶ್ ರೈ ಬೆಳ್ಳಿಪ್ಪಾಡಿ, ಯು.ಎಲ್. ಉದಯಕುಮಾರ್, ಬ್ಯಾಂಕ್ ಸಿಬ್ಬಂದಿಗಳಾದ ವನಿತಾ ಕೆ., ಸೌಮ್ಯಶ್ರೀ, ಜಯಲಕ್ಷ್ಮೀ ಕಿಣಿ, ಪ್ರವೀಣ್, ಕುಸುಮಾವತಿ ಮತ್ತಿತರರು ಉಪಸ್ಥಿತರಿದ್ದರು.

ಬ್ಯಾಂಕ್‌ನ ಉಪ್ಪಿನಂಗಡಿ ಶಾಖೆಯ ಹಿರಿಯ ಮೆನೇಜರ್ ವಿಶ್ರುತ ಕುಮಾರ್ ಸ್ವಾಗತಿಸಿ, ಸಹಾಯಕ ಮೆನೇಜರ್‌ಗಳಾದ ಡಯಾನ ವರ್ಗೀಸ್ ವಂದಿಸಿದರು. ವಿಕಿ ಕುಮಾರ್ ಕಾರ‍್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here