ಕುಕ್ಕೇಡಿ ಗ್ರಾಮ ಪಂಚಾಯತ್ ಗ್ರಾಮೀಣ ಕ್ರೀಡಾಕೂಟ

0


ಕುಕ್ಕೆಡಿ : ಕುಕ್ಕೇಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕೇಡಿ ಮತ್ತು ನಿಟ್ಟಡೆ ಗ್ರಾಮಗಳ ಪುರುಷರಿಗೆ ಹಾಗೂ ಮಹಿಳೆಯರಿಗೆ ಮುಕ್ತ ಕಬಡ್ಡಿ, ಖೋ ಖೋ ಮತ್ತು ಹಗ್ಗಜಗ್ಗಾಟ ಕ್ರೀಡಾಕೂಟ ಅ.16 ರಂದು ಕುಕ್ಕೇಡಿ ಗ್ರಾಮ ಪಂಚಾಯತಿನ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಜರುಗಿತು.

ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ಧನ ಪೂಜಾರಿ ಕಾರ್ಯಕ್ರಮವನ್ನು  ಉದ್ಘಾಟಿಸಿದರು.

ಪಂಚಾಯತ್ ಸದಸ್ಯರಾದ ಗೋಪಾಲ ಶೆಟ್ಟಿ, ದಿನೇಶ್ ಮೂಲ್ಯ, ಧನಂಜಯ್, ಅನಿತಾ , ವೇಣೂರು ಗ್ರಾ.ಪಂ. ಸದಸ್ಯ ಲೋಕಯ್ಯ ಪೂಜಾರಿ, ಕುಕ್ಕೆಡಿ ಪಿಡಿಒ ನವೀನ್ ಎ.,ಆರೋಗ್ಯ ಸಹಾಯಕಿ ರಮ್ಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕ್ರೀಡಾಕೂಟದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ತೀರ್ಪುಗಾರರಾಗಿ ಲೋಕಯ್ಯ ಪೂಜಾರಿ, ಕೇಶವ, ಸತೀಶ್ ಹೆಗ್ಡೆ ಹಾಗೂ ಕು| ಸಕಿತ ಸಹಕರಿಸಿದರು. ಪಿಡಿಒ ನವೀನ್ ಸ್ವಾಗತಿಸಿ, ಸಿಬ್ಬಂದಿ ಆನಂದ ವಂದಿಸಿದರು,ಮಂಜುಶ್ರೀ ಭಜನಾ ಮಂದಿರದ ಅಧ್ಯಕ್ಷ ಜಗನ್ನಾಥ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here