ಪುಣಚ ಗ್ರಾ.ಪಂ. ವ್ಯಾಪ್ತಿಯಲ್ಲಿ 2.18 ಕೋ.ವೆಚ್ಚದ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ

0

ಪುಣಚ: ಪುಣಚ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2.18 ಕೋ. ವೆಚ್ಚದ ಕಾಮಗಾರಿಗಳ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮ ಪುತ್ತೂರು ಶಾಸಕ ಸಂಜೀವ ಮಠಂದೂರು ನೆರವೇರಿಸಿದರು. 1 ಕೋ. ವೆಚ್ಚದ ದೇವಿನಗರ-ಕಲ್ಲಾಜೆ-ಆಜೇರು ರಸ್ತೆ ಕಾಂಕ್ರೀಟೀಕರಣ, 20 ಲಕ್ಷ ರೂ. ವೆಚ್ಚದ ಅಜ್ಜಿನಡ್ಕ-ಪಟಿಕಲ್ಲು ರಸ್ತೆ ಕಾಂಕ್ರೀಟೀಕರಣ, ತಲಾ 10 ಲಕ್ಷ ವೆಚ್ಚದಲ್ಲಿ ನೆಲ್ಲಿಗುಡ್ಡೆ-ಆಜೇರು ರಸ್ತೆ ಕಾಂಕ್ರೀಟೀಕರಣ, ಕೂರೇಲು-ಓಟೆತ್ತಟ್ಟ ರಸ್ತೆ ಕಾಂಕ್ರೀಟೀಕರಣ, ಮೂಡಂಬೈಲು-ಬಳಂತಿಮೊಗೇರು ರಸ್ತೆ ಕಾಂಕ್ರೀಟೀಕರಣ, ಕೊಡೆಂಚಿಯಡ್ಕ-ಸರವು-ಅಬಡ್ಕ ರಸ್ತೆ ಕಾಂಕ್ರಿಟೀಕರಣ, ತಿಮ್ಮಯಮೂಲೆ-ನಾರುಮೂಲೆ-ಚಿಪ್ಲುಕೋಟೆ ರಸ್ತೆ ಕಾಂಕ್ರೀಟೀಕರಣ, ಮಂಜ-ಪೊನ್ನೆತ್ತಡ್ಕ-ಮೂಡಾಯಿಬೆಟ್ಟು ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗಳಿಗೆ ಶಿಲಾನ್ಯಾಸ, 33 ಲಕ್ಷ ವೆಚ್ಚದ ನರೆಗುಂಡಿ-ಸರೋಳಿ ರಸ್ತೆ ಕಾಂಕ್ರೀಟೀಕರಣಕ್ಕೆ ಶಿಲಾನ್ಯಾಸ ನಡೆಸಲಾಯಿತು. ಪುಣಚ ನೀರುಮಜಲು ಕೋಟಿ ಚೆನ್ನಯ ಬೈದರ್ಕಳ ಗರಡಿ ಕ್ಷೇತ್ರಕ್ಕೆ 5 ಲಕ್ಷ ರೂ. ವೆಚ್ಚದಲ್ಲಿ ನಡೆಸಲಾದ ಇಂಟರ್‌ಲಾಕ್ ವ್ಯವಸ್ಥೆಯನ್ನು ಉದ್ಘಾಟಿಸಿದರು.

 


ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು, ಮಾಜಿ ಅಧ್ಯಕ್ಷ ಉದಯಕುಮಾರ್ ದಂಬೆ, ಸದಸ್ಯರಾದ ಮಹೇಶ್ ಶೆಟ್ಟಿ ಬೈಲುಗುತ್ತು, ಹರೀಶ ಎಂ. ಮಾರಮಜಲು, ನವೀನ್ ಭಂಡಾರಿ ಮೂಡಂಬೈಲು, ಜಯರಾಮ ರೈ ಮೂಡಂಬೈಲು, ಪ್ರವೀಣ್ ನಾಯಕ್ ಬೊಳ್ಳರಡ್ಕ, ಯುವ ಉದ್ಯಮಿ ಪ್ರೀತಂ ಪೂಂಜ ಅಗ್ರಾಳ, ಪಂಚಾಯತ್ ಪಿಡಿಒ ಲಾವಣ್ಯ ಹಾಗೂ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here