ಉದಯವಾಣಿ ಪತ್ರಿಕೆ ಆಯೋಜಿಸಿದ ಮನೆಮನೆಯಲ್ಲಿ ಯಶೋದಾ-ಕೃಷ್ಣ ಫೋಟೋ ಸ್ಪರ್ಧೆಯಲ್ಲಿ ಪ್ರಶಸ್ತಿ

0

ಉದಯವಾಣಿ ಪತ್ರಿಕೆಯು ಆಯೋಜಿಸಿದ ಮನೆಮನೆಯಲ್ಲಿ ಯಶೋಧ ಕೃಷ್ಣ ಫೋಟೋ ಸ್ಪರ್ಧೆ -2022 ಇದರಲ್ಲಿ ಸುಳ್ಯ ತಾಲ್ಲೂಕು ಮಟ್ಟದ ಮೆಚ್ಚುಗೆ ಪ್ರಶಸ್ತಿಯನ್ನು ನಿನಾದ್ ಮೂರ್ತಿ ಕೆ.ವಿ.ಹಾಗೂ ಪೂಜಾ ಶ್ರೀ ವಿತೇಶ್ ಕೋಡಿ ಪಡೆದುಕೊಂಡಿದ್ದಾರೆ.ಇವರಿಗೆ ಉದಯವಾಣಿ ಹಾಗೂ ಜಯಲಕ್ಷ್ಮಿ ಸಿಲ್ಕ್ಸ್ ಉದ್ಯಾವರ ಸಹಯೋಗದೊಂದಿಗೆ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗಿದೆ.
ಹಾಗೂ ಗೋಕುಲಂ ಮಕ್ಕಳ ಸಿದ್ಧ ಉಡುಪುಗಳ ಮಳಿಗೆ ಮತ್ತು ರಂಗ ಮಯೂರಿ ಕಲಾಶಾಲೆ ( ರಿ) ಸುಳ್ಯ ಆಯೋಜಿಸಿದ ಯಶೋದಾ ಕೃಷ್ಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದು ಪ್ರಶಸ್ತಿ ಲಭಿಸಿದೆ.

ಪೂಜಾಶ್ರೀಯವರು ಮರ್ಕಂಜದ ಕೋಡಿಮನೆ ವಿತೇಶ್ ರವರ ಪತ್ನಿ. ಸುದ್ದಿ ಚಾನೆಲ್ ನ ಉದ್ಯೋಗಿಯಾಗಿದ್ದಾರೆ.

LEAVE A REPLY

Please enter your comment!
Please enter your name here