ಕಾಂಚನ ಪ್ರೌಢಶಾಲೆಯಲ್ಲಿ ಬೇಸಿಗೆ ಶಿಬಿರ

0

 

ನೆಲ್ಯಾಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್ ಸೊಸೈಟಿ ಉಜಿರೆ ಇದರ ಆಡಳಿತಕ್ಕೊಳಪಟ್ಟ ಕಾಂಚನ ವೆಂಕಟ ಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯಲ್ಲಿ 12ದಿನಗಳ ಬೇಸಿಗೆ ಶಿಬಿರ ನಡೆಯಿತು.

ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಲಕ್ಷ್ಮಣರವರು ಶಿಬಿರ ಉದ್ಘಾಟಿಸಿದರು. ಪ್ರತಿದಿನ ಬೆಳಿಗ್ಗೆ ಸಭಾ ಕಾರ್ಯಕ್ರಮ ನಡೆಯಿತು. ಹಿರಿಯ ವಿದ್ಯಾರ್ಥಿಗಳಾದ ಅನಿಲ್ ಪಿಂಟೋ, ರಾಮಚಂದ್ರ, ರತಿದೇವಿ, ವಸಂತಕೃಷ್ಣ, ಪವನ್ ಕುಮಾರ್ ರೈ, ಧನಂಜಯ, ಉದಯಚಂದ್ರ, ಹೇಮರಾಜ್, ಮನೋಜ್, ರಶ್ಮಿತಾ, ಬಾಲಕೃಷ್ಣ ಅಲೆಕ್ಕಿ, ಮಧುಶ್ರೀ ಕಾಂಚನ, ಮಧುಶ್ರೀ, ಗಾಯತ್ರಿ, ಪುಷ್ಪರಾಜ, ರಂಜಿತ್‌ರವರು ಅತಿಥಿಗಳಾಗಿ ಭಾಗವಹಿಸಿದ್ದರು.

ವಿವಿಧ ತರಬೇತಿ:
ಬೆಳಿಗ್ಗೆ ೧೧.೧೫ ರಿಂದ ೧೨.೩೦ರ ತನಕ ಹಾಗೂ ಅಪರಾಹ್ನ ೧.೪೫ರಿಂದ ೩.೪೫ರ ತನಕ ತರಬೇತಿ ಕಾರ್ಯಕ್ರಮ ನಡೆಯಿತು. ಚಿಂತನ ಚಿಲುಮೆ ಬೇಸಿಗೆ ಶಿಬಿರದಲ್ಲಿ ನೆರೆಯ ಶಾಲೆಯ ಅಧ್ಯಾಪಕರಾದ ಮಂಜುನಾಥ್‌ರವರು Spoken English ತರಬೇತಿ ನೀಡಿದ್ದರು. ರಾಮಕುಂಜದ ಸುಮನಾ ಕಲ್ಲೂರಾಯರವರು ಕರಕುಶಲ ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ಕೀಬಂಚ್, ಕಿವಿಯ ಆಭರಣ, ಪೇಪರ್ ಸ್ಟೇಂಡ್ ತಯಾರಿ ಕುರಿತು ತರಬೇತಿ ನೀಡಿದರು. ಕಾವ್ಯಾರವರು ಪೇಪರ್ ಕ್ರಾಫ್ಟ್, ಡ್ರಾಯಿಂಗ್ ತರಬೇತಿ ನೀಡಿದರು. ಶಾಲಾ ಅಧ್ಯಾಪಕಿ ವಿಜಯಲಕ್ಷ್ಮೀಯವರು ರಂಗೋಲಿ, ಹೊಲಿಗೆ ಬಗ್ಗೆ ಶಿಕ್ಷಣ ನೀಡಿದರು. ಕಾಂಚನ ಈಶ್ವರ ಭಟ್‌ರವರ ಶಿಷ್ಯಂದಿರಾದ ಶಿಲ್ಪ, ವಿದ್ಯಾಸರಸ್ವತಿ ಹಾಗೂ ಶ್ರೀರಾಮರವರು ವಿದ್ಯಾರ್ಥಿಗಳಿಗೆ ಸಂಗೀತ ತರಬೇತಿ ನೀಡಿದರು. ಡಾ| ವಾಣಿ ಸಂತೋಷ್‌ರವರು ಆರೋಗ್ಯದ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ದರ್ಶನಕ್ಕೆಂದು ಹಿರಿಯ ವಿದ್ಯಾರ್ಥಿನಿ ಬಜತ್ತೂರಿನ ಯಶೋಧಾರವರ ಮನೆಗೆ ಭೇಟಿ ನೀಡಲಾಯಿತು. ಶಾಂತಿನಗರ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪ್ರದೀಪ್ ಬಾಕಿಲರವರು ನಾಯಕತ್ವದ ತರಬೇತಿ ನೀಡಿದರು. ಶಿಬಿರದಲ್ಲಿ ಒಂದು ದಿನ ವಿದ್ಯಾರ್ಥಿಗಳಿಗೆ ಬೆಂಕಿ ಇಲ್ಲದ ಅಡುಗೆ ಸ್ಪರ್ಧೆ ನಡೆಯಿತು.

 


ಸಮಾರೋಪ:
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವೇಣುಗೋಪಾಲ್ ನಾಯಕ್‌ರವರ ಅಧ್ಯಕ್ಷತೆಯಲ್ಲಿ ಸಮಾರೋಪ ನಡೆಯಿತು. ಶಿಬಿರದಲ್ಲಿ ಹಲವು ಸಾಂದರ್ಭಿಕ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಶಾಲಿನಿ ಶೇಖರ, ಶಿವಾನಂದ ಕಾರಂತ್, ಕೃಷ್ಣಪ್ರಸಾದ್‌ರವರು ಸಂದರ್ಭೋಚಿತವಾಗಿ ಮಾತನಾಡಿದರು. ಮುಖ್ಯೋಪಾಧ್ಯಾಯ ಸೂರ್ಯಪ್ರಕಾಶರವರು ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿ, ಮುಂದಿನ ವರ್ಷದ ಯೋಜನೆಯನ್ನು ಬಿಡುಗಡೆಗೊಳಿಸಿದರು. ವಿದ್ಯಾರ್ಥಿಗಳ ಹೆತ್ತವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯ ಬಳಿಕ ವಿದ್ಯಾರ್ಥಿಗಳಿಗೆ ಮುಂದಿನ ವರ್ಷದ ಪಠ್ಯಪುಸ್ತಕವನ್ನು ವಿತರಿಸಲಾಯಿತು. ವಿಜಯಲಕ್ಷ್ಮಿಯವರ ನೇತೃತ್ವದಲ್ಲಿ ಶಿಬಿರ ನಡೆಯಿತು. ಜಯಲಕ್ಷ್ಮೀ, ಜ್ಞಾನೇಶ್, ಸುಜಾತ, ಮಂಜುಳ, ರೇಣುಕಾ ಬಾಯಿ ಸಹಕರಿಸಿದರು.

LEAVE A REPLY

Please enter your comment!
Please enter your name here