ವಳತ್ತಡ್ಕ ಕಟ್ಟಡದ ಗೋಡೆಯಲ್ಲಿ ಮಾನಹಾನಿಕರ, ಬೆದರಿಕೆ ಭಿತ್ತಿಪತ್ರ

0

  • ದಲಿತ ದೌರ್ಜನ್ಯ ಪ್ರಕರಣ ದಾಖಲಿಸಲು ದೂರು-ಪ್ರಕರಣ ದಾಖಲು
  • ಪಕ್ಷದಿಂದ ಪೋಸ್ಟರ್ ಅಂಟಿಸಿಲ್ಲ ಸಮಗ್ರ ತನಿಖೆಯಾಗಲಿ-ಬಿಜೆಪಿ ಆಗ್ರಹ

ಪುತ್ತೂರು:ದಲಿತ ಸಂಘಟನೆಯನ್ನು ಉದ್ದೇಶಿಸಿ ಅವಮಾನಿಸಿ, ಬೆದರಿಕೆಯೊಡ್ಡಿರುವ ಭಿತ್ತಿ ಪತ್ರವನ್ನು ಆರ್ಯಾಪು ಗ್ರಾಮದ ವಳತ್ತಡ್ಕದಲ್ಲಿ ಕಟ್ಟಡದ ಗೋಡೆಯೊಂದರಲ್ಲಿ ಅಂಟಿಸಿ ಮಾನಹಾನಿ ಮಾಡಲಾಗಿದ್ದು ಇದೊಂದು ದಲಿತ ದೌರ್ಜನ್ಯ ಪ್ರಕರಣ ಎಂದು ಆರೋಪಿಸಿ ದಲಿತ ಸಂಘಟನೆಗಳು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.ಇದೇ ಪ್ರಕರಣದ ಕುರಿತು ಬಿಜೆಪಿ ಬೂತ್ ಸಮಿತಿಯಿಂದಲೂ ಪೊಲೀಸರಿಗೆ ದೂರು ನೀಡಿ, ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.

 


ಅವಮಾನಕರ ಮಾನಹಾನಿ ಭಿತ್ತಿ ಪತ್ರ ಅಳವಡಿಸಿರುವ ಆರೋಪಿಗಳಾಗಿರುವ ರಾಮ್ ಪ್ರಸಾದ್ ಮತ್ತು ಗ್ರಾಮ ಪಂಚಾಯತ್ ಸದಸ್ಯ ರುಕ್ಮಯ್ಯ ಮೂಲ್ಯ ಎಂಬವರ ವಿರುದ್ಧ ಆರ್ಯಾಪು ಗ್ರಾಮದ ಸಚಿನ್ ವಳತ್ತಡ್ಕ ಅವರು ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 2 ತಿಂಗಳ ಹಿಂದೆ ಒಳತ್ತಡ್ಕ ಕಾಲನಿಗೆ ಕುಡಿಯುವ ನೀರಿನ ವಿಚಾರವಾಗಿ ತಾನು ಹೋರಾಡಿರುವುದರಿಂದ ಕೆಲವರಿಗೆ ನನ್ನ ಮೇಲೆ ಅಸಮಾಧಾನ ಇರುತ್ತದೆ.ಇದು ಘಟನೆಗೆ ಹಿನ್ನೆಲೆಯಾಗಿದೆ ಎಂದು ದೂರಿನಲ್ಲಿ ಸಚಿನ್‌ರವರು ತಿಳಿಸಿದ್ದಾರೆ.

ಘಟನೆಯ ಕುರಿತು ಮೇ ೧೬ರಂದು ವಳತ್ತಡ್ಕ ಬೈರ ಸಮಾಜ ಬಾಂಧವರು ಹಾಗು ದಲಿತ ಮುಖಂಡರು ಪುತ್ತೂರು ಡಿವೈಎಸ್ಪಿ ಡಾ.ಗಾನ ಪಿ.ಕುಮಾರ್ ಹಾಗು ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಅವರನ್ನು ಭೇಟಿ ಮಾಡಿ ವಿಚಾರ ತಿಳಿಸಿ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು.ಈ ಸಂದರ್ಭದಲ್ಲಿ ದ.ಕ ದಲಿತ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೇದ್ರಕಾಡು,ಜಿಲ್ಲಾ ಅಧ್ಯಕ್ಷ ಚಂದ್ರಶೇಖರ್ ಯು ವಿಟ್ಲ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ನಾಗರಾಜ್ ಎಸ್ ಲ್ಯಾಲ ಬೆಳ್ತಂಗಡಿ, ದಲಿತ ಮುಖಂಡರಾದ ಅಭಿಷೇಕ್ ಬೆಳ್ಳಿಪ್ಪಾಡಿ ಮತ್ತು ಹೇಮನಾಥ್ ಅರ್ಲಪದವು, ಬೈರ ಸಮಾಜ ಸೇವಾ ಸಂಘ ಪುತ್ತೂರು ಪ್ರಧಾನ ಕಾರ್ಯದರ್ಶಿ ಹರೀಶ್ ಬೆಟ್ಟಂಪಾಡಿ, ಜೊತೆ ಕಾರ್ಯದರ್ಶಿ ಧರ್ಮಣ ಎಸ್ ವಳತ್ತಡ್ಕ,ಸ್ಥಳೀಯರಾದ ಈಶ್ವರ ಯು ವಳತ್ತಡ್ಕ, ದಿನೇಶ್ ವಳತ್ತಡ್ಕ,ರಮೇಶ್ ವಳತ್ತಡ್ಕ, ಹರೀಶ್ ವಳತ್ತಡ್ಕ, ರಘು ವಳತ್ತಡ್ಕ, ವಿಜಯ ವಳತ್ತಡ್ಕ, ಚನ್ನಪ್ಪ ವಳತ್ತಡ್ಕ, ಪ್ರಮೋದ್ ವಳತ್ತಡ್ಕ, ಮಿಥುನ್ ವಳತ್ತಡ್ಕ, ಸುಜನ್ ವಳತ್ತಡ್ಕ.ಸುರೇಶ್ ವಳತ್ತಡ್ಕ, ನಿಡ್ಪುಳಿ ವಳತ್ತಡ್ಕ, ಪ್ರದೀಪ್ ನಿಡ್ಪಳ್ಳಿ, ಇತರರು ಉಪಸ್ಥಿತರಿದ್ದರು.

ಈ ಹಿಂದೆಯೂ ದೂರು ನೀಡಲಾಗಿತ್ತು: ಭಿತ್ತಿ ಪತ್ರದಲ್ಲಿ ಮಾನಹಾನಿಕರ ಪದ ಪ್ರಯೋಗಿಸಿದ ವಿಚಾರವಾಗಿ ಮೇ ೯ರಂದು ದೂರು ನೀಡಲಾಗಿತ್ತು.ಭಿತ್ತಿ ಪತ್ರ ಅಳವಡಿಸಿರುವ ಘಟನೆಗೆ ಸಂಬಂಧಿಸಿ ತನಿಖೆ ಮಾಡುವ ಕುರಿತು ಆಗ ಠಾಣೆಯಲ್ಲಿ ಹಿಂಬರಹ ನೀಡಲಾಗಿತ್ತು.ಮೇ ೧೬ರಂದು ರಾಮಪ್ರಸಾದ್ ಎಂಬವರು ಫೋನ್ ಮೂಲಕ ನಾನು ಪುನಃ ಭಿತ್ತಿ ಪತ್ರ ಅಂಟಿಸುತ್ತೇನೆ ಎಂದು ಹೇಳಿದ್ದ ಬಳಿಕ ಸಚಿನ್ ವಳತ್ತಡ್ಕ ಅವರು ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಮುಖಂಡರು ತಿಳಿಸಿದ್ದಾರೆ.

ದಲಿತ ಸಂಘಟನೆಗಳಿಂದ ಪೊಲೀಸರಿಗೆ ದೂರು

LEAVE A REPLY

Please enter your comment!
Please enter your name here