ಕೆಯ್ಯೂರು ಪಾಲ್ತಾಡಿ, ಬೊಳಿಕಲ, ಮಣಿಕ್ಕರ ಪ್ರಗತಿಬಂಧು-ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ

0

  • ಧಾರ್ಮಿಕ ಕಾರ್ಯಕ್ರಮ ನಡೆದು ಸಮಾಜ ಬದಲಾವಣೆಯಾದರೆ ಉತ್ತಮವಾದ ಗ್ರಾಮಾಭಿವೃದ್ದಿ ಸಮಾಜಕ್ಕೆ ಪೂರಕ: ಎಸ್.ಬಿ.ಜಯರಾಮ ರೈ ಬಳಜ್ಜ

ಕೆಯ್ಯೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ)ಪುತ್ತೂರು, ಪ್ರಗತಿಬಂಧು,ಸ್ವಸಹಾಯ ಸಂಘಗಳ ಒಕ್ಕೂಟ ಕೆಯ್ಯೂರು, ಪಾಲ್ತಾಡಿ, ಬೊಳಿಕಲ ಮತ್ತು ಮಣಿಕ್ಕಾರ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜಯಕರ್ನಾಟಕ ಸಭಾಭವನ ಕೆಯ್ಯೂರಿನಲ್ಲಿ ಜು 24ರಂದು ನಡೆಯಿತು. ಉದ್ಧಾಟನೆಯನ್ನು ಶ್ರೀ ಕ್ಷೇತ್ರ ಕೆಯ್ಯೂರು ದೇವಳದ ವ್ಯವಸ್ಥಾಪನಾ ಸಮಿತಿ ಅದ್ಯಕ್ಷ ಶಶಿಧರ ರಾವ್ ಬೊಳಿಕಲ ದೀಪ ಪ್ರಜ್ವಲಿಸಿ, ಹಿಂಗಾರ ಅರಳಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತಾಡಿದ ಅವರು ಸ್ವಂತ ಸ್ವಾವಲಂಬನೆಯ ಬದುಕು ದುಡಿಮೆಯಿಂದ ಮನುಷ್ಯನ ಜೀವನ, ಬೆವರು ಸುರಿಸಿ ದುಡಿದರೆ ಮಾತ್ರ ಬದುಕು ಮತ್ತು ಯಶಸ್ಸು ಸಾಧ್ಯ. ಗ್ರಾಮದ ಜನರನ್ನು ಒಟ್ಟು ಗೂಡಿಸುವ ಶಕ್ತಿ ‌ಗ್ರಾಮಾಭಿವೃದ್ದಿ ಯೋಜನೆ ಎಂಬ ಸಂಘಟನೆಗೆ ಇದೆ, ಇಂತಹ ಸಂಘಟನೆಯಿಂದ ಸದಸ್ಯರಿಗೆ ಬಲ ಬಂದಂತಾಗಿದೆ ಎಂದು ಶುಭ ಹಾರೈಸಿದರು. ಸಭಾಧ್ಯಕ್ಷತೆಯನ್ನು ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಉಪಾಧ್ಯಕ್ಷ ಎಸ್.ಬಿ. ಜಯರಾಮ ರೈ ಬಳಜ್ಜ ವಹಿಸಿ ಇಂತಹ ದಾರ್ಮಿಕ ಕಾರ್ಯಕ್ರಮಗಳು ನಡೆದು ಸಮಾಜದ ಬದಲಾವಣೆಯಾದರೆ ಒಂದು ಉತ್ತಮ ಗ್ರಾಮಾಭಿವೃದ್ಧಿಯಾಗಿ ಸಮಾಜಕ್ಕೆ ಪೂರಕವಾಗುತ್ತದೆ, ಎಂದು ಶುಭ ಹಾರೈಸಿದರು. ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ.ಟ್ರಸ್ಟ್ ಪುತ್ತೂರು ಯೋಜನಾಧಿಕಾರಿ ಆನಂದ.ಕೆ, ಮಾತಾನಾಡಿ ಮನಸ್ಸಿನ ಬದಲಾವಣೆಗಳನ್ನು ‌ಗ್ರಾಮಾಭಿವೃದ್ದಿ ಮೂಲಕ ಪರಿಹರಿಸಬಹುದು, ‌ಗ್ರಾಮಾಭಿವೃದ್ದಿ ಯೋಜನೆಯಿಂದ ಎಲ್ಲರೂ ‌ಆರ್ಥಿಕ ಉಳಿತಾಯ, ಸಾಮಾಜಿಕ ಬದ್ದತೆ, ಶಿಸ್ತು ‌ಆಳವಡಿಸುದರ ಜತೆಗೆ ಸಮಾಜದ ಮುಖ್ಯ ವಾಹಿನಿಗೆ ‌ಬರುವಂತಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಪುತ್ತೂರು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಅಧ್ಯಕ್ಷ ಮಹಾಬಲ ರೈ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಉಡುಪಿ ವಿಜಿಲೆನ್ಸಿ ಮ್ಯಾನಜರ್ ಕೃಷ್ಣಪ್ಪ, ಕೆಯ್ಯೂರು ಗ್ರಾ.ಪಂ.ಅದ್ಯಕ್ಷೆ ಜಯಂತಿ ಎಸ್ ಭಂಡಾರಿ, ಕೆಯ್ಯೂರು ಜನಜಾಗೃತಿ ಗ್ರಾಮಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಮೆರ್ಲ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಕೆಯ್ಯೂರು, ಪಾಲ್ತಾಡಿ, ಬೊಳಿಕಲ, ಮಣಿಕ್ಕಾರ ಒಕ್ಕೂಟದ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ನಿಕಟ ಪೂರ್ವ ಪದಾಧಿಕಾರಿಗಳು ‌ತಾಂಬೂಲ, ಪುಸ್ತಕ, ಹಸ್ತಾಂತರಿಸುದರ ಮೂಲಕ ‌ಅಧಿಕಾರವನ್ನು ‌ಹಸ್ತಾಂತರಿಸಿದರು.‌ಕೆಯ್ಯೂರು ಸೇವಾ ಪ್ರತಿನಿಧಿ ಜಯ ಪಿ.ರೈ ಮೂರು ವರ್ಷದ ವರದಿಯನ್ನು ಮಂಡನೆ ಮಾಡಿದರು. ಈ ಸಂದರ್ಭದಲ್ಲಿ ಕೆಯ್ಯೂರು, ಪಾಲ್ತಾಡಿ, ಬೊಳಿಕಲ, ಮಣಿಕ್ಕರ ದ ನೂತನ ಪದಾಧಿಕಾರಿಗಳಿಗೆ ಹೂ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಿಕಟಪೂರ್ವ ಪದಾದಿಕಾರಿಗಳ ಅಧ್ಯಕ್ಷರುಗಳು ತಮ್ಮ ಅವದಿಯಲ್ಲಿ ನಡೆದ ಅನುಭವಗಳ ಮಾಹಿತಿಯನ್ನು ಹಂಚಿಕೊಂಡರು. ಸೇವಾ ಪ್ರತಿನಿಧಿಗಳಾದ ವಾರಿಜ, ಜಯಾ.ಪಿ.ರೈ, ರಜನಿ, ಕು.ನವ್ಯ ಆರ್ ಸಹಕರಿಸಿದರು. ದೀಪದ ಅಲಂಕಾರವನ್ನು ಮಾಯಿಲ ಅಜಿಲ ಕಣಿಯಾರು ಮತ್ತು ದೇವರ ಮಂಟಪವನ್ನು ತಯಾರಿಸಿದ ದನಂಜಯ ಇವರನ್ನು ಸ್ಮರಣಿಕೆ ನೀಡಿ ಗೌರವಿಸಿದರು.ಕೆಯ್ಯೂರು, ಕೊಳ್ತಿಗೆ, ಬೊಳಿಕಲ, ಮಣಿಕ್ಕಾರ, ಪಾಲ್ತಾಡಿ ಒಕ್ಕೂಟ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕೆದಂಬಾಡಿ ವಲಯ ಮೇಲ್ವಿಚಾರಕಿ  ಶೃತಿ  ಉಮೇಶ್, ಸ್ವಾಗತಿಸಿ, ಬೊಳಿಕಲ ಒಕ್ಕೂಟ ನಿಕಟಪೂರ್ವ ಕಾರ್ಯದರ್ಶಿ ಪುಷ್ಪಾವತಿ ವಂದಿಸಿ, ಪುತ್ತೂರು ಜ್ಞಾನವಿಕಾಸ ಸಮನ್ವಯಾಧಿಕಾರಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿ.

LEAVE A REPLY

Please enter your comment!
Please enter your name here