ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅಳದಂಗಡಿ ವಲಯದ 441 ನೇಯ ಸ್ವ ಸಹಾಯ ಸಂಘ ಉದ್ಘಾಟನೆ

0

ಅಳದಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅಳದಂಗಡಿ ವಲಯದ 441 ನೇಯ ಸ್ವ ಸಹಾಯ ಸಂಘ ವನ್ನು ಒಕ್ಕೂಟದ ಅಧ್ಯಕ್ಷರಾದ  ತಾರಾ ರವರ ಅದ್ಯಕ್ಷತೆಯಲ್ಲಿ, ತಾಲೂಕಿನ ಯೋಜನಾಧಿಕಾರಿ  ಯಶವಂತ್ ಎಸ್ ರವರು  ಉದ್ಘಾಟಿಸಿ  ಮಾತನಾಡಿ ಶಿಸ್ತು ಬದ್ದ ವ್ಯವಹಾರದಿಂದ ಅಭಿವೃದ್ಧಿ ಸುಲಭ ಸಾಧ್ಯ ಎಂದರು.

10 ಮಂದಿ ಸಮಾನ ಮನಸ್ಕರ ಸ್ವ ಸಹಾಯ ಸಂಘ ಕ್ಕೆ ಗುರುದೇವ ಸ್ವ ಸಹಾಯ ಸಂಘ ಎಂದು ನಾಮಕರಣ ಮಾಡಲಾಯಿತು.

ಸ್ವ ಉದ್ಯೋಗ, ಆರ್ಥಿಕ ಸ್ವಾವಲಂಬನೆ, ಶಿಸ್ತು , ಸಾಮಾಜಿಕ ಕಳಕಳಿಯ ದೃಷ್ಟಿಯಿಂದ ಪ್ರಾರಂಬಿಸಿದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಂಘ ಗಳು 40 ವರ್ಷ ಪೂರ್ಣ ಗೊಂಡ ಈ ಅವಧಿಯಲ್ಲಿಯೂ ಯುವಕ ಯುವತಿಯರಿಗೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಹೊಸ ಸಂಘ ಗಳು‌ ಪ್ರಾರಂಭವಾಗುತ್ತಿವೆ ಪರಸ್ಪರ ಸಹಕಾರ ಮನೋಭಾವದಿಂದ ಬ್ಯಾಂಕ್‌ ಮೂಲಕ ಆರ್ಥಿಕ ಸಹಕಾರ ಪಡೆದು ಅಭಿವೃದ್ಧಿ ಹೊಂದಲು ಉತ್ತಮ‌ ಅವಕಾಶ ಈ ಸ್ವ ಸಹಾಯ ಸಂಘಗಳ ಮೂಲಕ ನಮಗೆ ದೊರೆತಿದೆ‌ ಎಂದು  ತಾರಾ ರವರು ತಿಳಿಸಿದರು.

ಈ ಸಂದರ್ಭದಲ್ಲಿ ವಿವಿಧ ವೃತ್ತಿ ಯಲ್ಲಿ ತೊಡಗಿಕೊಂಡಿರುವ 10 ಮಂದಿ ಯುವ ಸದಸ್ಯರು ಉಪಸ್ಥಿತರಿದ್ದು ವಲಯದ ಮೇಲ್ವಿಚಾರಕಿ  ಸುಮಂಗಳ ರವರು ಸ್ವಾಗತಿಸಿ ಸೇವಾಪ್ರತಿನಿದಿ ಮಮತಾ ಶುಭಕರ್ ರವರು ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here