ಯುವವಾಹಿನಿ ನೇತೃದಲ್ಲಿ ತುಳುನಾಡ ತುಡರ್ ಪರ್ಬ

0

ಗುರುವಾನಕೆರೆ :ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ‌ ಪುರಸ್ಕೃತ ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಗೆಳೆಯರ ಬಳಗ ಗುರುವಾಯನಕೆರೆ, ಶ್ರೀ ಗುರುಮಿತ್ರ ಸಮೂಹ (ರಿ.) ಬೆಳ್ತಂಗಡಿ, ಶ್ರೀ‌ ಶಾರದಾಂಭ ಭಜನಾ‌ ಮಂಡಳಿ ಗುರುವಾಯನಕೆರೆ, ಶ್ರೀ ಕ್ಷೇತ್ರ ಮಂಚಕಲ್ಲು ಸೇವಾ ಸಮಿತಿ ಗುರುವಾಯನಕೆರೆ ಸಹಕಾರದೊಂದಿಗೆ ದೀಪಾವಳಿ ಹಬ್ಬದ ಪ್ರಯುಕ್ತ ನಾಲ್ಕನೇ ವರ್ಷದ ತುಳುನಾಡ ತುಡರ್ ಪರ್ಬ ಸಾಮೂಹಿಕ ದೀಪಾವಳಿ ಆಚರಣೆಯನ್ನ ಗುರುವಾಯನಕೆರೆ ಶಾರದಾ ಮಂಟಪದಲ್ಲಿ ಅ.24 ರಂದು ಆಚರಿಸಲಾಯಿತು.

ದೀಪ ಬೆಳಗಿಸಿ ಕಾರ್ಯಕ್ರಮವನ್ನ ಉದ್ಘಾಟಿಸಿ ನಂತರ ಶ್ರೀ ಗುರುಮಿತ್ರ ಸಮೂಹದ ಸದಸ್ಯರಿಂದ ಭಜನೆ, ನವಶಕ್ತಿ ಮುಂಡೂರು ತಂಡದಿಂದ ಕುಣಿತ ಭಜನೆ, ಗೋ ಪೂಜೆ ಮತ್ತು ಸಾಮೂಹಿಕವಾಗಿ ಎಲ್ಲರೂ ಸಾವಿರ ಹಣತೆಗಳನ್ನ ಬೆಳಗುವ ಮುಖೇನ‌ ಸಂಭ್ರಮಿಸಿದರು.‌

ಕಾರ್ಯಕ್ರಮದಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ  ಸುಜಾತ ಅಣ್ಣಿ ಪೂಜಾರಿ, ಗೆಳೆಯರ ಬಳಗದ ಅಧ್ಯಕ್ಷರಾದ ಕೃಷ್ಣಾನಂದ, ಶಾರದಾಂಭ ಭಜನ ಮಂಡಳಿಯ ಅಧ್ಯಕ್ಷರು ರೀತಾ ವೈ ಅಚಾರ್ಯ, ಮಂಚಕಲ್ಲು ಸೇವಾ ಸಮಿತಿ ಅಧ್ಯಕ್ಷರಾದ ಧನಂಜಯ್ ರಾವ್, ಶ್ರೀ ಗುರುಮಿತ್ರ‌ ಸಮೂಹದ ಅಧ್ಯಕ್ಷರಾದ ಸ್ಮಿತೇಶ್ ಬಾರ್ಯ, ಕಾಮಿಡಿ‌ ಕಿಲಾಡಿ‌ ಅನೀಶ್ ಪೂಜಾರಿ ವೇಣೂರು, ಯುವವಾಹಿನಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿಗಳಾದ ಎಮ್ ಕೆ ಪ್ರಸಾದ್, ಗೌರವ ಸಲಹೆಗಾರರಾದ ರಮಾನಂದ ಸಾಲ್ಯಾನ,‌ಮಾಜಿ‌ ಅಧ್ಯಕ್ಷರು ಪ್ರಶಾಂತ್‌ ಮಚ್ಚಿನ, ಉಪಾಧ್ಯಕ್ಷರಾದ ಜಯರಾಜ್ ನಡಕ್ಕರ, ಸ್ಥಾಪಕಾಧ್ಯಕ್ಷರಾದ ರಾಕೇಶ್‌ ಮೂಡುಕೋಡಿ, ಸಲಹೆಗಾರರಾದ ಶ್ರೀ ಅಣ್ಣಿ ಪುಜಾರಿ, ಗೆಳೆಯರ ಬಳಗದ ಕಾರ್ಯದರ್ಶಿ ಮಂಜುನಾಥ್ ಕುಂಬ್ಳೆ, ಘಟಕದ ಕಾರ್ಯದರ್ಶಿ‌ ಸಂತೋಷ್ ಅರಳಿ, ನಿಯೋಜಿತ ಅಧ್ಯಕ್ಷರಾದ ಅಶ್ವತ್ ಕುಮಾರ್, ಕಾರ್ಯದರ್ಶಿ ಸುನೀಲ್‌ ಕನ್ಯಾಡಿ, ಉಪಾಧ್ಯಕ್ಷರಾದ ಗುರುರಾಜ್ ಗುರಿಪಳ್ಳ, ಸದಾಶಿವ ಊರ, ಸುಧಾಮಣಿ ಆರ್, ಈ ಕಾರ್ಯಕ್ರಮದ ಸಂಯೋಜಕರಾದ ಚಂದ್ರಹಾಸ ಬಳಂಜ ಮತ್ತು ಸರ್ವ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here