ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿಗೆ ನಾಲ್ಕು  ರ‍್ಯಾಂಕ್ ಗಳು

0

ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2021 ನೇ ಸಾಲಿನ ಪದವಿ ಪರೀಕ್ಷೆಯಲ್ಲಿ ಇಲ್ಲಿನ ವಿವೇಕಾನಂದ ಪದವಿ ಕಾಲೇಜಿಗೆ ನಾಲ್ಕು ರ‍್ಯಾಂಕ್ ಗಳು ಲಭಿಸಿವೆ. ವಿಜ್ಞಾನ ವಿಭಾಗದಲ್ಲಿ ದಿವ್ಯಾ ಎಸ್ ಭಟ್( ಪಿಎಂಸಿಎಸ್) ಎರಡನೇ ರ್ಯಾಂಕ್, ಅನುಶ್ರೀ ಎಸ್ ಭಟ್ (ಬಿಝೆಡ್ಸಿ) ಮೂರನೇ ರ‍್ಯಾಂಕ್, ಶಿವಾನಿ ಮಲ್ಯ(ಬಿಝೆಡ್ಸಿ) ಆರನೇ ರ‍್ಯಾಂಕ್ಹಾ ಗೂ ಕಲಾ ವಿಭಾಗದಲ್ಲಿ ಸುಮಾ ವೈ. ಭಟ್ (ಎಚ್ಇಪಿ) ಹತ್ತನೇ ರ‍್ಯಾಂಕ್ ಗಳಿಸಿರುತ್ತಾರೆ. ಇವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಅಧ್ಯಾಪಕ ಹಾಗೂ ಅಧ್ಯಾಪಕೇತರ ವೃಂದದವರು ಅಭಿನಂದನೆ ಸಲ್ಲಿಸಿರುತ್ತಾರೆ.

 

 

LEAVE A REPLY

Please enter your comment!
Please enter your name here