ಎಸ್ ಕೆ ಎಸ್ ಎಸ್ ಎಫ್ ಪುತ್ತೂರು ವಲಯ ಸಮಿತಿಯ ಇಫ್ತಾರ್ ಟೆಂಟ್

0

ಪುತ್ತೂರು:ಎಸ್ ಕೆ ಎಸ್ ಎಸ್ ಎಫ್ ಕೇಂದ್ರ ಸಮಿತಿಯ ರಂಝಾನ್ ಕ್ಯಾಂಪಯಿನ್ ಭಾಗವಾಗಿ ನಡೆಸಲ್ಪಡುವ ಇಫ್ತಾರ್ ಟೆಂಟ್ ಎಸ್ ಕೆ ಎಸ್ ಎಸ್ ಎಫ್ ಪುತ್ತೂರು ವಲಯ ಸಮಿತಿಯ ನೇತೃತ್ವದಲ್ಲಿ ಪುತ್ತೂರು ನಗರದಲ್ಲಿ ನಡೆಯಿತು.

 


ವಲಯ ಅಧ್ಯಕ್ಷ ಇಬ್ರಾಹಿಂ ಬಾತಿಷ ಪಾಟ್ರಕೋಡಿ ಇಫ್ತಾರ್ ಕಿಟ್ ಯಾತ್ರಾರ್ಥಿಗಳಿಗೆ ನೀಡುವ ಮೂಲಕ ಚಾಲನೆ ನೀಡಿದರು. ಸ್ಥಳೀಯ ವ್ಯಾಪಾರಸ್ಥರು ಮತ್ತು ಯಾತ್ರಾರ್ಥಿಗಳು ಇಫ್ತಾರ್ ಟೆಂಟಿನಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಎಸ್ ಕೆ ಎಸ್ ಎಸ್ ಎಫ್ ಪುತ್ತೂರು ವಲಯ ಉಪಾಧ್ಯಕ್ಷ ರಝಾಕ್ ಅಝ್ಹರಿ ಸವಣೂರು, ಕೋಶಾಧಿಕಾರಿ ಶಾಫಿ ಪಾಪೆತ್ತಡ್ಕ, ಎಸ್ ಕೆ ಎಸ್ ಎಸ್ ಎಫ್ ದ.ಕ ಈಸ್ ಜಿಲ್ಲಾ ಜೊತೆ ಕಾರ್ಯದರ್ಶಿ ಅಶ್ರಫ್ ಮುಕ್ವೆ, ಸಹಚಾರಿ ಚಯರ್ಮಾನ್ ಸಯ್ಯಿದ್ ಅಫ್ಹಂ ತಂಙಳ್ ಕರಾವಳಿ, ವಲಯ ಕಾರ್ಯಕಾರಿ ಸಮಿತಿ ನಾಯಕರಾದ ಅಬ್ದುಲ್ ಕರೀಂ ಸವಣೂರು, ಅಬ್ದುಲ್ ಕರೀಂ ಫೈಝಿ ಸಂಟ್ಯಾರ್, ಹನೀಫ್ ಮುಕ್ವೆ, ಎಲ್ ಟಿ ಫಾರೂಕ್ ಕೂರ್ನಡ್ಕ, ಸಿನಾನ್ ಪರ್ಲಡ್ಕ, ಶರೀಫ್ ದಾರಿಮಿ ಸವಣೂರು, ಫರ್ವೀಝ್ ಪಡೀಲ್, ಜಿಲ್ಲಾ ವಿಖಾಯ ಕನ್ವೀನರ್ ಆಸಿಫ್ ಕಬಕ, ವಲಯ ವಿಖಾಯ ನಾಯಕರಾದ ಇಬ್ರಾಹಿಂ ಕಡವ, ರಿಯಾಝ್ ಫೈಝಿ ಪಟ್ಟೆ, ಹನೀಫ್ ನಂದಿನಿ, ಜಮಾಲುದ್ದೀನ್ ಸವಣೂರು, ಹಫೀಝ್ ರಹ್ಮಾನ್ ಮುಕ್ವೆ, ಬಾತಿಷ ಸಾಲ್ಮರ, ಅರ್ಶದ್ ಕೆನರಾ ಉಪಸ್ಥಿತರಿದ್ದರು.
ವಲಯ ಪ್ರಧಾನ ಕಾರ್ಯದರ್ಶಿ ನಝೀರ್ ಅರ್ಶದಿ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಶಾಫಿ ಮೌಲವಿ ಸಾಲ್ಮರ ವಂದಿಸಿದರು.

LEAVE A REPLY

Please enter your comment!
Please enter your name here